ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷ ತಿರುಗಾಟದ 30ರ ಯಕ್ಷ ಸಂಭ್ರಮ-ಹಿರಿಯ ಕಲಾವಿದರಿಗೆ ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜೂನ್ 9 , 2014
ಜೂನ್ 9, 2014

ಯಕ್ಷ ತಿರುಗಾಟದ 30ರ ಯಕ್ಷ ಸಂಭ್ರಮ-ಹಿರಿಯ ಕಲಾವಿದರಿಗೆ ಸನ್ಮಾನ

ಸಿದ್ದಾಪುರ : ಶ್ರೀ ಮಂದಾರ್ತಿ ಮೇಳದ ಹಿರಿಯ ಕಲಾವಿದ ಆಜ್ರಿ ಉದಯ ಕುಮಾರ ಶೆಟ್ಟಿ ಯವರ ಯಕ್ಷ ತಿರುಗಾಟದ 30ನೇ ವರ್ಷದ ತಿರುಗಾಟದ ಸವಿನೆನಪಿಗಾಗಿ ಇದೇ ಜೂನ್ 18ರಂದು ಮದ್ಯಾಹ್ನ 2 ಗಂಟೆಗೆ ಸಿದ್ದಾಪುರದ ರಂಗನಾಥ ಸಬಾ ಭವನದಲ್ಲಿ ಮಂದಾರ್ತಿ ಐದೂ ಮೇಳಗಳ ಆಯ್ದ ಕಲಾವಿದರು ಮತ್ತು ಅತಿಥಿ ಕಲಾವಿದರಿಂದ ಯಕ್ಷ ವೈಭವ ಹಮ್ಮಿಕೊಳ್ಳ ಲಾಗಿದೆ.

ಅಂದು ಗಣ್ಯರ ಉಪಸ್ಥಿತಿಯಲ್ಲಿ ಮಂದಾರ್ತಿ ಮೇಳದ ಈರ್ವರು ಹಿರಿಯ ಎರಡನೇ ವೇಷದಾರಿಗಳಾದ ನರಾಡಿ ಭೋಜರಾಜ ಶೆಟ್ಟಿ ಮತ್ತು ಆಜ್ರಿ ಗೋಪಾಲ ಗಾಣಿಗರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು. ಬಳಿಕ ``ಓಂ ನಮೋ ಶಿವಾಯ`` ಎಂಬ ಪೌರಾಣಿಕ ಪ್ರಸಂಗದ ಪ್ರದರ್ಶನವಿದೆ.

ವಿಶೇಷ ಆಕರ್ಷಣೆಯಲ್ಲಿ ಹಾಸ್ಯ ದಿಗ್ಗಜರಾದ ಹಳ್ಳಾಡಿ ಜಯರಾಮ ಶೆಟ್ಟಿಯವರ ಯಮ, ಸೀತಾರಾಮ ಕುಮಾರರ ಪ್ರೇತ, ಕಡಬ ಪೂವಪ್ಪನವರ ಚಿತ್ರಗುಪ್ತ, ಶಶಿಕಾಂತ ಶೆಟ್ಟಿಯವರ ತ್ರೀಲೋಕ ಸುಂದರಿ, ವಿದ್ಯಾದರ ಜಲವಳ್ಳಿಯವರ ದುರ್ಜಯಾಸುರ, ಪ್ರಸನ್ನ ಶೆಟ್ಟಿಗಾರ್ ಶ್ವೇತಕುಮಾರನಾಗಿ ಕಾಣಿಸಿಕೊಳ್ಳಲಿದ್ದಾರೆ ವಿಶೇಷ ಪಾತ್ರಗಳಲ್ಲಿ ತೆಂಕುತಿಟ್ಟಿನ ಪ್ರತಿಭೆ ಸಂತೋಷ ಕುಲಶೇಖರ, ರಾಮಚಂದ್ರ ಇಡುವಾಣಿ, ಹೆನ್ನಾಬೈಲು ವಿಶ್ವನಾಥ ಪೂಜಾರಿ, ಮಾನ್ಯ ನರಸಿಂಹ ಮುಂತಾದವರು ಬಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಬಾಗವತರಾಗಿ ನಗರ ಸುಬ್ರಮಣ್ಯ ಆಚಾರ್ ಮತ್ತು ಸುರೇಶ ಶೆಟ್ಟಿ, ಚಂಡೆ ಮದ್ದಳೆಯಲ್ಲಿ ರಮೇಶ ಭಂಡಾರಿ ಮತ್ತು ಪ್ರಶಾಂತ್ ಭಂಡಾರಿ ಸಹಕರಿಸಲಿದ್ದಾರೆ.

30ರ ಸಂಬ್ರಮದ ಸಬಾ ಕಾರ್ಯಕ್ರಮದಲ್ಲಿ ಕಮಲಶಿಲೆ ದೇವಸ್ಥಾನದ ದರ್ಮದರ್ಶಿ ಸಚ್ಚಿದಾನಂದ ಚಾತ್ರ, ಉದ್ಯಮಿ ಹಾಲಾಡಿ ತಾರಾನಾಥ ಶೆಟ್ಟಿ, ಮಣಿಪಾಲ ಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟಿ. ನವೀನಚಂದ್ರ ಶೆಟ್ಟಿ, ಎಚ್ ನಾರಾಯಣ ಶೆಟ್ಟಿ ಕಮಲಶಿಲೆ ಮೇಳ, ಸುರೇಂದ್ರ ಶೆಟ್ಟಿ ಸಿದ್ದಾಪುರ ಮುಂತಾದವರು ಬಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಯ್ಯೋಜಕ ಕಲಾವಿದ ಆಜ್ರಿ ಉದಯ ಕುಮಾರ ಶೆಟ್ಟರು ತಿಳಿಸಿದ್ದಾರೆ.

ಆಜ್ರಿ ಗೋಪಾಲ ಗಾಣಿಗ




ನರಾಡಿ ಭೋಜರಾಜ ಶೆಟ್ಟಿ



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ